ಸುವರ್ಣ ಸೇತುವೆ ವರ್ಷ ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ವಿಷ್ಣುವರ್ಧನ್, ಆರತಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಗೀತಪ್ರಿಯ ನಿರ್ದೇಶಿಸಿದ್ದರು. ಇದೊಂದು ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಎಚ್.ಜಿ.ರಾಧಾದೇವಿಯವರು ಬರೆದಿರುವ ಇದೇ ಹೆಸರಿನ ಕಾದಂಬರಿಯನ್ನು ಚಲನಚಿತ್ರವಾಗಿ ನಿರ್ಮಿಸಲಾಗಿದೆ. ಈ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.